July 24, 2025

nimmavaani.com

ಸತ್ಯ, ನ್ಯಾಯ, ನೀತಿ


Italian TrulliItalian Trulli

Addvertisment

ಕೆ ಆರ್ ಎಸ್ ಲಿಂಗೇಗೌಡರಿಗೆ ಶ್ರದ್ಧಾಂಜಲಿ

ಪಾದಯಾತ್ರೆಯಲ್ಲಿ ನಿಧನ ಹೊಂದಿದ ಕೆ ಆರ್ ಎಸ್ ಪಕ್ಷದ ಕಾರ್ಯಾಧ್ಯಕ್ಷ ಲಿಂಗೇಗೌಡರಿಗೆ ಶ್ರದ್ಧಾಂಜಲಿ

ಹಿರಿಯೂರು :ಡಿಸೆಂಬರ್ 12ರಂದು ಹಿರಿಯೂರು ಪ್ರವಾಸಿ ಮಂದಿರದಲ್ಲಿ ಅಗಲಿದ ರೈತ ಹೋರಾಟಗಾರ, ಕೆ.ಆರ್‌.ಎಸ್.ಪಕ್ಷದ ಕಾರ್ಯಾಧ್ಯಕ್ಷ, ಮಾಜಿ ಡಿವೈಎಸ್ಪಿ ಅಬಕಾರಿ ಇಲಾಖೆ ಎಸ್. ಹೆಚ್. ಲಿಂಗೇಗೌಡರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕಸವನಹಳ್ಳಿ ರಮೇಶ್ ನಾಡು ಕಂಡ ಅಪರೂಪದ ರಾಜಕಾರಣಿ ಹೋರಾಟಗಾರ ಉನ್ನತ ಮಟ್ಟದ ಸರ್ಕಾರಿ ಹುದ್ದೆಯನ್ನು ತ್ಯಜಿಸಿ ತನ್ನ ಸ್ನೇಹಿತ ಡಿ.ಕೆ. ರವಿ ಐ.ಎ.ಎಸ್.ಇವರ ಆತ್ಮಕ್ಕೆ ಶಾಂತಿ ಕೋರಿ ಪಾದಯಾತ್ರೆ ಮಾಡಿ ಅಲ್ಲಿಂದ ಇಲ್ಲಿಯವರೆಗೆ ಮದ್ಯ ನಿಷೇಧ ಆಂದೋಲನ ಪಾದಯಾತ್ರೆ, ಭ್ರಷ್ಟಾಚಾರ ವಿರೋಧಿ ಹೋರಾಟಗಳು, ಜಾತಿ ವ್ಯವಸ್ಥೆ ವಿರುದ್ಧ ನಿರಂತರ ಸಿಡಿದೆಳುತ್ತಿದ್ದ ಲಿಂಗೇಗೌಡ್ರು ಹಿರಿಯೂರು ತಾಲ್ಲೋಕಿನ ಧರ್ಮಪುರ ಫೀಡರ್ ಚಾನಲ್ ಮತ್ತು ತಾಲ್ಲೋಕು ರಚನೆ ಹೋರಾಟದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಅಲ್ಲದೆ ಹೋರಾಟಗಳಲ್ಲಿ ನಾವೆಲ್ಲ ಜೊತೆಯಾಗಿ ಭಾಗವಹಿಸಿ ಹಗಲು ರಾತ್ರಿ ಸುಸ್ಥಿರ ಸಮಾಜ ಕಟ್ಟುವ ಬಗ್ಗೆ ಚರ್ಚಿಸುತ್ತಿದ್ದ ಜ್ಞಾನ, ತಿಳುವಳಿಕೆಯಲ್ಲಿ ಅಪಾರ ಅನುಭವ ಹೊoದಿದ್ದರು.ಇಂತಹವರನ್ನು ಕಳೆದುಕೊಂಡ ಸಮಾಜಕ್ಕೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ಎಸ್ ವಿ ರಂಗನಾಥ್ ಮಾತನಾಡಿ ಕಾಗದ ರಹಿತ ಕಚೇರಿ ಕರೆನ್ಸಿ ರಹಿತ ವ್ಯವಹಾರ,ಆನ್ಲೈನ್ ಓಟಿಂಗ್ ಬ್ಯಾಂಕ್ ಟ್ರಾಂಜ್ಯಾಕ್ಸನ್ ಟ್ಯಾಕ್ಷ್ (BTT )ಜಾರಿ ಮುಂತಾದ ಆಡಳಿತ ಸುಧಾರಣೆ ಹಾಗೂ ಜನಸ್ನೇಹಿ ಆಡಳಿತಕ್ಕಾಗಿ ಸದಾ ಹಂಬಲಿಸುತ್ತಿದ್ದ ಹಾಗೂ ರಾಜಕಾರಣ ಪಿತ್ರಾರ್ಜಿತ ಸ್ವತ್ತಾಗಬಾರದು,ಜನಸಾಮಾನ್ಯರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಾಗ ಮಾತ್ರ ಪ್ರಜಾಪ್ರಭುತ್ವ ಗೆಲ್ಲಲು ಸಾಧ್ಯ ಎಂದು ಹೇಳುತ್ತಿದ್ದ ಲಿಂಗೇಗೌಡರ ಹಗಲುವಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು. ಕೆ ಆರ್ ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ವಿನಯ್ ರಾಜ್ ಮಾತನಾಡಿ ಅವರಿಂದ ಸ್ಪೂರ್ತಿ ಪಡೆದು ನಾವೆಲ್ಲ ಹೋರಾಟಕ್ಕೆ ಬಂದಿದ್ದೇವೆ ಸಮಾಜದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಲಿಂಗೇಗೌಡರು ಅದನ್ನು ಸದಾ ಎಚ್ಚರಿಸುತ್ತಿದ್ದರು ಎಂದು ದುಃಖ ಭರಿತರಾಗಿ ಹೇಳಿದರು ಪಿಟ್ಲಾಲಿ ಶ್ರೀನಿವಾಸ್ ರಾಮಚಂದ್ರ ಕಸವನಹಳ್ಳಿ ರಘುನಂದನ್ ಇತರರು ಅಗಲಿದ ನಾಯಕ ಲಿಂಗೇಗೌಡರ ಫೋಟೋಕ್ಕೆ ಮಾಲಾರ್ಪಣೆ ಮಾಡಿ ಅಶೃತರ್ಪಣೆ ಸಲ್ಲಿಸಿದರು.