July 24, 2025

nimmavaani.com

ಸತ್ಯ, ನ್ಯಾಯ, ನೀತಿ


Italian TrulliItalian Trulli

Addvertisment

ಜಿಲ್ಲಾ ಸಚಿವ ಡಿ ಸುಧಾಕರ್ ರವರ ಆದೇಶಕ್ಕೂ ಬರದ KSRTC ಬಸ್ಸುಗಳು.

ಜಿಲ್ಲಾ ಸಚಿವ ಡಿ ಸುಧಾಕರ್ ರವರ ಆದೇಶಕ್ಕೂ ಬರದ KSRTC ಬಸ್ಸುಗಳು. ಜಯಪ್ರಕಾಶ್ ಕೆ ಕೆ ಹಟ್ಟಿ ಯಲ್ಲದಕೆರೆ

ಕಳೆದ ನಾಲ್ಕು ತಿಂಗಳ ಹಿಂದೆ ಯಲ್ಲದ ಕೆರೆ ಗ್ರಾಮ ಪಂಚಾಯಿತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಪ್ರಮುಖ ಪತ್ರಿಕೆಗಳಲ್ಲಿ ಬಂದಿದ್ದು ಇದನ್ನು ನೋಡಿದ ಸಚಿವರು ಕೂಡಲೇ ಆ ಭಾಗಕ್ಕೆ ಬಸ್ಸುಗಳನ್ನ ಬಿಡಿ ಎಂದು ಆದೇಶಿಸಿದ್ದರು ಸಾರಿಗೆ ಇಲಾಖೆಯು ಯಾವುದೇ ಬಸ್ಸುಗಳನ್ನು ಬಿಡದೆ ಸಚಿವರ ಆದೇಶವನ್ನು ಧಿಕ್ಕರಿಸಿದ್ದು ಈ ವಿಚಾರವಾಗಿ ಯಲ್ಲದ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ನಾಲ್ಕು ತಿಂಗಳಿಂದ ನೋಡುತ್ತಲೇ ಬಂದಿದ್ದರು ಆದರು ಬಸ್ಸುಗಳು ಬರಲೇ ಇಲ್ಲ ಎಲ್ಲಾ ಕಾರಣಕ್ಕೆ ಇಂದು ಮಳೆಯನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ರಸ್ತೆ ತಡೆ ಚಳುವಳಿ ನಡೆಸಿದರು. ಈ ಸಂದರ್ಭದಲ್ಲಿ ಬಂದಂತಹ ಪೊಲೀಸ್ ನವರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಎದರಿಸಿದರು ಆದರೆ ವಿದ್ಯಾರ್ಥಿಗಳು ನೀವು ಕೇಸ್ ಹಾಕಿ ಪರವಾಗಿಲ್ಲ ,ನಮಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಬಸ್ಸುಗಳನ್ನು ಬಿಡಿ ಎಂದು ಅವಲತ್ತುಕೊಂಡರು. ಈ ಸಂದರ್ಭದಲ್ಲಿ ಬಂದಂತಹ ಸಾರಿಗೆ ಇಲಾಖೆಯವರು ಇನ್ನು ವಾರದೊಳಗೆ ಬಸ್ಸನ್ನ ಬಿಡುತ್ತೇವೆ ಎಂದು ಹೇಳಿದರು. ಆದರೆ ವಿದ್ಯಾರ್ಥಿಗಳು ಇನ್ನೂ ವಾರದವರೆಗೂ ನಾವು ಹಿರಿಯೂರಿನವರೆಗೂ ನಡೆದುಕೊಂಡು ಬರಬೇಕೇ ಅಥವಾ ಶಾಲಾ-ಕಾಲೇಜುಗಳನ್ನು ಹಾಗೂ ಪಾಠ ಪ್ರವಚನದಿಂದ ವಂಚಿತರಾಗಬೇಕೆಂದು ಕೇಳಿದರು. ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ ಆದರೆ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚುವರಿ ಬಸುಗಳು ಇರಬೇಕಾಗಿತ್ತು, ಆದರೆ ಬಸ್ ಗಳನ್ನು ಕಡಿಮೆ ಮಾಡಲಾಗಿದೆ ಅಲ್ಲದೆ ಇರುವಂತ ಬಸ್ ಗಳು ರಿಪೇರಿಗೆ ಹೋಗಿವೆ. ಅಲ್ಲದೆ ಖಾಸಗಿ ಅವರಿಗೆ ಪರ್ಮಿಟ್ ಕೊಡದೆ ಅವರು ಸಹ ಬಸ್ಗಳನ್ನು ಓಡಿಸುತ್ತಿಲ್ಲ. ಇಂತಹ ದ್ವಂದ್ವ ನೀತಿಗಳಿಂದ ನಾವುಗಳು ಹಾಳಾಗುತ್ತಿದ್ದೇವೆ.ಕೊನೆಗೆ ವಿದ್ಯಾರ್ಥಿಗಳಾದ ನಾವು ಇನ್ನು ವಾರದವರೆಗೂ ಮನೆಯಲ್ಲಿ ಇರುತ್ತೇವೆ. ನಾವು ಪರೀಕ್ಷೆಯಲ್ಲಿ ಫೇಲಾದರೆ ನೀವುಗಳೇ ಹೊಣೆ ? ನೀವು ಬಸ್ಸು ಬಿಟ್ಟ ತಕ್ಷಣ ಶಾಲೆಗೆ ಹೋಗುತ್ತೇವೆ ಎಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಅಧಿಕಾರಿಗಳ ಪೊಲೀಸರ ಮನವರಿಕೆಯ ನಂತರ ಧರಣಿಯನ್ನು ವಾಪಸ್ ತೆಗೆದುಕೊಂಡರು.