ಆರೋಪಿಗಳ ಹೆಸರು ಕೈಬಿಡಲು ಒಂದು ಲಕ್ಷ ಲಂಚ ಕೇಳಿದ ಪೋಲಿಸಪ್ಪ.
ದಾವಣಗೆರೆ : ಕುಟುಂಬ ಗಲಾಟೆಯೊಂದರ ಪ್ರಕರಣಕ್ಕೆ ಸಂಬಂಧಿಸಿ ಎಡರು ಮಹಿಳಾ ಆರೋಪಿಗಳ ಹೆಸರನ್ನು ಕೈಬಿಡಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ದಾವಣಗೆರೆ ಪೊಲೀಸ್ ಅಧಿಕಾರಿ ಇದೀಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲಿಗೆ ಹೋಗಿದ್ದಾರೆ.
ಒಂದು ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿರುವ ಕುರಿತ ದೂರಿನ ಮೇರೆಗೆ 50,000ಲಂಚ ಪಡೆಯುವಾಗಲೇ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ASI ಈರಣ್ಣನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ದಾಳಿಗೆ ಕಾರಣ: ಮಣಿಕಂಠ ಆಚಾರ್ಯ ಅವರ ತಾಯಿ ಭಾಗ್ಯಮ್ಮ ಹಾಗೂ ಪತ್ನಿ ಅರ್ಚನಾ ವಿರುದ್ಧ ಗಲಾಟೆ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಚಾರ್ಜ್ಶೀಟ್ನಲ್ಲಿ ಹೆಸರು ಕೈಬಿಡಲು ಒಂದು ಲಕ್ಷ ರೂಪಾಯಿಯನ್ನು ಈರಣ್ಣ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಮಣಿಕಂಠ ಆಚಾರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮೊದಲ ಕಂತಿನಲ್ಲಿ 50 ಸಾವಿರ ರೂಪಾಯಿ ಪಡೆಯುವಾಗ ಈರಣ್ಣನನ್ನು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಅಪರಾಧಿಯನ್ನು ಬಂಧಿಸಿದ್ದಾರೆ.
More Stories
ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ಧರ್ಮಪುರ ಕೆರೆಗಳಿಗೆ ನೀರು ಹರಿಸಲು ಸಚಿವರಿಗೆ ಮನವಿ….. ಕಸವನಹಳ್ಳಿ ರಮೇಶ್