ಧರ್ಮಪುರ ಕೆರೆಗಳಿಗೆ ನೀರು ಹರಿಸಲು ಸಚಿವರಿಗೆ ಮನವಿ….. ಕಸವನಹಳ್ಳಿ ರಮೇಶ್
ಮಾನ್ಯ ಸಚಿವರಾದ ಸುಧಾಕರ್ ಹಾಗೂ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರು ವಾಣಿವಿಲಾಸ ಸಾಗರಕ್ಕೆ ಜನವರಿ ಅಂತ್ಯದವರೆಗೂ ನೀರು ಹರಿಸಲು ಆದೇಶ ಮಾಡಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.
ವಾಣಿವಿಲಾಸ ಸಾಗರ ಜಲಾಶಯ ತುಂಬುವ ಸನಿಹದಲ್ಲಿದ್ದು, ಸದ್ಯ ಚಾಲ್ತಿಯಲ್ಲಿರುವ ಧರ್ಮಪುರ ಕೆರೆಗಳಿಗೆ ನೀರು ಹರಿಸುವ ಹೊಸಹಳ್ಳಿ ಬ್ಯಾರೇಜ್ ಪಂಪ ಹೌಸ್ ಮೂಲಕ ತಾಲೂಕಿನ ತೋಟಗಾರಿಕೆ ಬೆಳೆಗಳಲ್ಲಿ ಅಗ್ರಸ್ಥಾನದಲ್ಲಿರುವ ಶಾಶ್ವತ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಧರ್ಮಪುರ ಭಾಗದ ಕೆರೆಗಳಿಗೆ ನೀರು ಹರಿಸಲು ಮನವಿ… ನೂರಾರು ವರ್ಷಗಳ ಹೋರಾಟದ ಫಲವಾಗಿ ಯೋಜನೆ ಜಾರಿಯಾಗಿದ್ದು. ಇಂತಹ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಮಾನ್ಯ ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಶ್ರೀ ಸುಧಾಕರ್ ಅವರು ಧರ್ಮಪುರ ಭಾಗದ ರೈತರ ನೆರವಿಗೆ ಬರಬೇಕೆಂದು ಮನವಿ ಮಾಡುತ್ತೇವೆ. ಈ ವರ್ಷ ವಾಣಿವಿಲಾಸ ಸಾಗರ ಮೂರನೇ ಬಾರಿ ತುಂಬುತ್ತಿದ್ದು ಇಂತಹ ಸುಸಂದರ್ಭದಲ್ಲಿ ಧರ್ಮಪುರ ಭಾಗದ ಕೆರೆಗಳೂ ಸಹ ಬರ್ತೀಯಾಗಲಿ. ಪದೇ ಪದೇ ಭದ್ರಾ ಜಲಾಶಯ ಭರ್ತಿಯಾಗುವುದಿಲ್ಲ ಅಲ್ಲದೆ ವಾಣಿವಿಲಾಸ ಸಾಗರಕ್ಕೂ ಎಲ್ಲ ವರ್ಷಗಳಲ್ಲಿ ನೀರು ಸಿಗುವುದಿಲ್ಲ, ಸಿಕ್ಕಿರುವಂತ ಸುಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಿಕೊಂಡು ಮುಂದಿನ ಅಭಾವದ ದಿನಗಳಿಗೆ ಅನುಕೂಲ ಮಾಡಿಕೊಳ್ಳಬಹುದು. ಆದ್ದರಿಂದ ಸಚಿವರು ಈ ಭಾಗದ ಜನರ ಕನಸನ್ನು ನನಸು ಮಾಡಬೇಕೆಂದು ಕಸವನಹಳ್ಳಿ ರಮೇಶ್ ಅಧ್ಯಕ್ಷರು ನೀರಾವರಿ ಹೋರಾಟ ಸಮಿತಿ,ಪ್ರದಾನ ಕಾರ್ಯದರ್ಶಿ ಆಲೂರು ಸಿ.ಸಿದ್ದರಾಮಣ್ಣ,ರಾಮಚಂದ್ರ ಕಸವನಹಳ್ಳಿ ಸಾಮಾಜಿಕ ಕಾರ್ಯಕರ್ತ ಎಸ್.ವಿ.ರಂಗನಾಥ್,,ಕುಮಾರ್, ಹೊಸಯಳನಾಡು ತಿಪ್ಪೇಸ್ವಾಮಿ , ಸಾತಿಳಿಸಿದರು.
More Stories
ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ಭ್ರಷ್ಟಾಚಾರತೆಗೆ ಬ್ರಾಂಡ್ ಆಗುತ್ತಿದೆ ಬೆಂಗಳೂರು.