ನಾಯಕನಹಟ್ಟಿ : ನಾಯಕನಹಟ್ಟಿ ಕೃಷಿ ಪತ್ತಿನ ಸಹಾಕರ ಸಂಘ ದಿವಾಳಿಯಾಗುವುದಕ್ಕೆ ಹಿಂದಿನ ಕಾರ್ಯದರ್ಶಿಯಿಂದ ಎಂದು ನಾಯಕನಹಟ್ಟಿ ಕೃಷಿ ಪತ್ತಿನ ಸಹಾಕರ ಸಂಘ ಅಧ್ಯಕ್ಷರಾದ ಜೆ.ಆರ್.ರವಿಕುಮಜೆ. ನೇರ ಆರೋಪ ಮಾಡಿದರು.
ಪಟ್ಟಣದ ನಾಯಕನಹಟ್ಟಿ ಕೃಷಿ ಪತ್ತಿನ ಸಹಾಕರ ಸಂಘ ಸಾಮಾನ್ಯ ಸಭೆ ಶುಕ್ರವಾರ ಜೆ.ಆರ್.ರವಿಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ ಮಾತನಾಡಿದ ಅವರು
ಸಹಕರ ಸಂಘ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಸಾಲ ಸೌಲಭ್ಯ ಪಡೆದು ರೈತರು ಸರಿಯಾದ ಸಮಯಕ್ಕೆ ಹಣ ಮರುಪಾವತಿ ಮಾಡಿದರೆ ಸಂಘ ಅಭಿವೃದ್ಧಿಯಾಗಲಿಕ್ಕೆ ಸಾಧ್ಯ.
ಕೃಷಿ ಪತ್ತಿನ ಸಹಾಕರ ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯಗಳು ರೈತರು ಸದುಪಯೋಗ ಪಡೆಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ರೈತರುಗಳ ಅನುಕೂಲಕ್ಕಾಗಿ ಕೃಷಿ ಪತ್ತಿನ ಸಹಾಕರ ಸಂಘ ಯಾವಗಲೂ ಬಾಗಿಲು ತೆರೆದಿರುತ್ತದೆ.
ನಮ್ಮ ಸಹಕಾರ ಸಂಘ ಅಭಿವೃದ್ಧಿಯಾಗಬೇಕಾದರೆ ಅತೀ ಹೆಚ್ಚು ಷೇರು ಆಗಬೇಕಿದೆ.
ಷೇರುದಾರರು ಹಣ ಮರುಪಾವತಿ ಮಾಡದೇ ಹೋದರೆ ಮೂರು ಬಾರಿ ತಿಳುವಳಿಕೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು.
ನಾಯಕನಹಟ್ಟಿ ಕೃಷಿ ಪತ್ತಿನ ಸಹಾಕರ ಸಂಘ ೪೧ ಲಕ್ಷದ ೩೧ ಸಾವಿರ ರೂ. ಸಾಲದ ಸುಳಿಯಲ್ಲಿ ಸಿಲುಕಿದೆ ಇದಕ್ಕೆ ಕಾರಣ ಹಿಂದಿನ ಕಾರ್ಯದರ್ಶಿ ಎಂದರು.
ಗಜ್ಜುಗಾನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತಾತ್ಕಾಲಿಕವಾಗಿ ಕಾರ್ಯದರ್ಶಿ ಬೋರಣ್ಣರವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಬೆಳಿಗ್ಗೆ ೯:೦೦ ಗಂಟೆಯಿAದ ೫:೦೦ ಗಂಟೆಯವರೆಗೆ ಪಡಿತರಿಗೆ ರೇಷನ್ ಕೊಡಬೇಕು. ಸರಿಯಾದ ಸಮಯಕ್ಕೆ ಅಧಿಕಾರಿಗಳು ಬರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಅಧ್ಯಕ್ಷರು ಜೆ.ಆರ್.ರವಿಕುಮಾರ್, ಉಪಾಧ್ಯಕ್ಷರು ಜಿ.ಎಸ್.ಕೃಷ್ಣಪ್ಪ, ನಿರ್ದೇಶಕರುಗಳಾದ ಗೊಂಚಿಗಾರ ಪಾಲಯ್ಯ, ಎನ್.ಪಿ.ಮಂಜುನಾಥ, ಹಾಯ್ಕಲ್ ರಾಜಯ್ಯ, ಸೋಮ್ಲನಾಯ್ಕ, ಬಿ.ಓ.ಬೋಸೆರಂಗಪ್ಪ, ಜಿ.ಪಿ.ಬಸವರಾಜ್, ಮಹಮದ್ ಅಕ್ರಮ್‌ವುಲ್ಲ, ನೀಲಮ್ಮ, ಎಲ್.ಸುರೇಶ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಬೋರಣ್ಣ ಪ್ರಭಾರ ಕಾರ್ಯದರ್ಶಿ, ಹಾಗೂ ನಾಯಕನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀಕಾಂತ್, ಎನ್.ಮಾರುತಿ, ಇನ್ನೂ ಇತರರು ಇದ್ದರು.
ವರದಿ ಹರೀಶ್ ನಾಯಕನಹಟ್ಟಿ
More Stories